ಅರ್ಕಾವತಿ ನದಿ: ಉಳಿಯಬೇಕಾದ್ದು ಹೇಗೆ?

0

keremanju - 13 June, 2009 | Bangalore | Action | Language and Culture

ಅರ್ಕಾವತಿ ಎಂದ ಕೂಡಲೇ ಎಲ್ಲರ ಆಲೋಚನಾ ಲಹರಿಹರಿಯುವುದು ಬಿಡಿಎ ನಿರ್ಮಿಸುತ್ತಿರುವ ಅರ್ಕಾವತಿ ಬಡಾವಣೆ ಬಗ್ಗೆ. ಇದನ್ನು ಸಂಪೂರ್ಣ ಬಡಾವಣೆಯನ್ನಾಗಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಶತಪ್ರಯತ್ನ ಮಾಡುತ್ತಿದೆ. ಬಡಾವಣೆಯ ಹೆಸರಿನ ಮೂಲ ಅರ್ಕಾವತಿ ನದಿ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಬೆಂಗಳೂರಿನಲ್ಲಿ ನದಿ ಇರಲು ಸಾಧ್ಯವೇ? ಎಂಬ ಪ್ರಶ್ನೆಯೇ ಎಲ್ಲರಿಗೂ...
ಅರ್ಕಾವತಿ ನದಿ ಬೆಂಗಳೂರಿನ ಒಳ, ಹೊರಗೆ ಹರಿದು, ಮಹಾನಗರಿಗರ ಜೀವಜಲವಾಗಿದೆ. ಹಿಂದೆ ಈ ನದಿಯೊಂದೇ ಕುಡಿಯುವ ನೀರಿನ ಮೂಲವಾಗಿತ್ತು. ಆದರೆ, ಇಂದು ಬೇಕಾಬಿಟ್ಟಿ ಅಭಿವೃದ್ಧಿ, ಬಡಾವಣೆ ನಿರ್ಮಾಣದಿಂದ ಅರ್ಕಾವತಿ ಅಳಿವಿನ ಅಂಚಿನಲ್ಲಿದೆ. ನದಿಯ ಬಗೆಗಿನ ನಿರ್ಲಕ್ಷ್ಯ ಮುಂದುವರಿದರೆ ಅರ್ಕಾವತಿ ನದಿ ಗತವೈಭವದ ಪುಟಗಳಲ್ಲೇ ಮರೆಯಾಗುತ್ತದೆ.
ಅರ್ಕಾವತಿ ನದಿಯ ಬಗ್ಗೆ ತಿಳಿದುಕೊಳ್ಳುವಾಗ ಬೆಂಗಳೂರಿಗೆ ಈಕೆ 105 ವರ್ಷಗಳಷ್ಟು ಕಾಲ ಕುಡಿಯುವ ನೀರು ಕೊಟ್ಟಿರುವುದನ್ನು ಮರೆಯಲು ಸಾಧ್ಯವಿಲ್ಲ. ಈಗಲೂ ಈಕೆ ತಿಪ್ಪಗೊಂಡನಹಳ್ಳಿ ಮೂಲಕ ಬೆಂಗಳೂರಿಗೆ ನೀರು ಸರಬರಾಜು ಮಾಡುತ್ತಲೇ ಇದ್ದಾಳೆ. ನಂದಿಬೆಟ್ಟದಿಂದ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಬೆಂಗಳೂರು ಉತ್ತರ, ದಕ್ಷಿಣ, ಮಾಗಡಿ ತಾಲೂಕುಗಳಲ್ಲಿ ಹರಿಯುತ್ತಾಳೆ. ಈ ಮಾರ್ಗದಲ್ಲಿ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ಅಣೆಕಟ್ಟು ಕಟ್ಟಲಾಯಿತು. ನಂತರ ತಿಪ್ಪಗೊಂಡನಹಳ್ಳಿ ನಿರ್ಮಾಣವಾಯಿತು. ಈಗಲೂ ಇಲ್ಲಿಂದ ನೀರು ಬೆಂಗಳೂರಿಗೆ ಸರಬರಾಜಾಗುತ್ತಿದೆ.
ಅರ್ಕಾವತಿ- ಬೆಂಗಳೂರಿನ ಜೀವನದಿ. ಹೈಟೆಕ್ ಪ್ರಪಂಚದಲ್ಲಿ ಕಣ್ಣುಕೊರೈಸುವಂತೆ ಬೆಳೆದುನಿಂತಿರುವ ಬೆಂಗಳೂರಿನಲ್ಲಿರುವ ಬಹಳಷ್ಟು ಮಂದಿಗೆ ಈ ಮಹಾನಗರದಲ್ಲಿ ನದಿ ಇದೆ. ಇಂದು ಅದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂಬುದು ಗೊತ್ತಿಲ್ಲ. ಅರ್ಕಾವತಿ- ಬೆಂಗಳೂರಿನ ಜೀವನದಿ. 115 ವರ್ಷಗಳ ಹಿಂದೆ ಈ ನಗರಕ್ಕೆ ಕುಡಿಯುವ ನೀರು ಒದಗಿಸಿದ ನದಿ. ಇಂದು ಅಳಿವಿನ ಅಂಚಿನಲ್ಲಿದೆ. ಈ ನದಿ ಉಳಿಯಬೇಕಾದ್ದು ಹೇಗೆ ಎಂಬ ದೃಷ್ಟಿಕೋನವನ್ನು ಹಂಚಿಕೊಳ್ಳಬೇಕಿದೆ.
ನದಿ ಉಳಿಸುವ ಬಗೆ ಹೇಗೆ ಎಂದು ಸಮುದಾಯವೇ ತೀರ್ಮಾನಿಸಬೇಕಿದೆ. ಈ ಬಗ್ಗೆ ನೀವೇನಂತೀರೀ?

Login or Register to post comments


PRAJA.IN COMMENT GUIDELINES

Posting Guidelines apply for comments as well. No foul language, hate mongering or personal attacks. If criticizing third person or an authority, you must be fact based, as constructive as possible, and use gentle words. Avoid going off-topic no matter how nice your comment is. Moderators reserve the right to either edit or simply delete comments that don't meet these guidelines. If you are nice enough to realize you violated the guidelines, please save Moderators some time by editing and fixing yourself. Thanks!