HOT TOPICS
SPOTLIGHT AGENCIES
ಮಹಾತ್ಮಾ ಗಾಂಧಿಯವರ ಜನ್ಮ ಸ್ಥಳದಲ್ಲಿ ಸತ್ಯದ ಕೊಲೆ? mbnataraj - 3-JUL-2010
ಮಹಾತ್ಮಾ ಗಾಂಧಿಯವರ ಜನ್ಮ ಸ್ಥಳದಲ್ಲಿ ಸತ್ಯದ ಕೊಲೆ
ಇತ್ತೀಚಿನ ಒಂದು ಘಟನೆಯೇ ಈ ಆಲೋಚನೆಗೆ ಮೂಲ ಕಾರಣ.
ಮೊದಲನೆಯ ನೋಟಕ್ಕೆ ಇದು ಅಷ್ಟು ದೊಡ್ಡ ಅಪರಾಧವೆಂದು ಅನ್ನಿಸದು.
ಆದರೆ ಸ್ವಲ್ಪ ಆಲೋಚನೆ ಮಾಡಿ ನೋಡಿದರೆ ಈ ಬಗೆಯ ಸಣ್ಣ ಸಣ್ಣ ದಿನಂಪ್ರತಿ ಆಗುವ ಮತ್ತು ನಾವು
ತಡೆದು ಕೊಳ್ಳುತ್ತಿರುವ ಪ್ರಸಂಗಗಳಿಂದಲೇ ನಮ್ಮ ದೇಶ ಹಾಳಾಗುತ್ತಿರುವ ಮುಖ್ಯ ಕಾರಣವನ್ನು ಕಾಣ ಬಹುದು.
ಎರಡು ವರ್ಷಗಳ ಕೆಳಗೆ ನನ್ನ ಮಗನ ದ್ವಿಚಕ್ರ ವಾಹನ ಶಿರಸ್ತ್ರಾಣ ಧರಿಸದೆ ನಡಿಸುತ್ತಿದ ಉಲ್ಲಂಘನೆಯ ಸೂಚನೆ ಬಂತು.
ಕಾನೂನು ಪರಿಪಾಲನೆಯ ಕರ್ತವ್ಯದ ಸಂಪೂರ್ಣ ಅರಿವಿದ್ದ ಅವನನ್ನು ಕೇಳಿದಾಗ ಸಾಧ್ಯವೇ ಇಲ್ಲವೆಂದು ಹೇಳಿದ.
ಆದರೂ ಅಕಸ್ಮಾತ್ ಅವನ ಸ್ನೇಹಿತರು ಯಾರಾದರೂ ಒಂದು ಕ್ಷಣ ತೆಗೆದುಕೊಂಡು ಹೋಗಿದ್ದರೆ ಹೊಗಿರಬಹುದೆಂಬ ಸಣ್ಣ
ಸಂಶಯದಿಂದ ಕೇವಲ ೧೦೦ ರೂಪಾಯಿ ಎಂದು ಕಟ್ಟಿ ಬಿಟ್ಟೆ.
ಈಗ ಒಂದು ವರ್ಷದ ಹಿಂದೆ ಇನ್ನೊಂದು ಅದೇ ದಿವಸ, ಅದೇ ಸಮಯಕ್ಕೆ ಅದೇ ಸ್ಥಳದಲ್ಲಿ ಅದೇ ಉಲ್ಲಂಘನೆ ಆದರೆ ಸೆಲ್ ಫೋನ್ ಉಪಯೋಗಿಸುತ್ತಿದ ಉಲ್ಲಂಘನೆಯೋಟ್ಟಿಗೆ ಬಂದಿತು.
ಆದರೆ ಈ ಬಾರಿ ಈ ಸೂಚನೆಯನ್ನು ನಂಬುವುದಕ್ಕೆ ಒಂದೇ ತೊಂದರೆ. ನನ್ನ ಮಗ ಅಮೇರಿಕಾದಲ್ಲಿ ಇದ್ದ.
ಆ ಸ್ಕೂಟರ್ನ ಏಕೈಕ ಚಾಲಕಿ ನನ್ನ ಮಗಳು ಅದೇ ಸಮಯಕ್ಕೆ ಮನೆಯಲ್ಲೇ ನಡೆಯುತ್ತಿದ್ದ ವರಲಕ್ಷ್ಮಿ ವ್ರತ, ಗೃಹ ಪ್ರವೇಶದಲ್ಲಿ ಭಾಗವಹಿಸುತ್ತಿದಳು.
|